ಮುಂಬೈ: ಸಚಿನ್ ತೆಂಡುಲ್ಕರ್ ಸದ್ದಿಲ್ಲದೇ ಸಮಾಜ ಮುಖಿ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಇದೀಗ ತಮ್ಮದೇ ತವರು ನೆಲದಲ್ಲಿ ಮಳೆಯಿಂದ ಸಂತ್ರಸ್ತರಾಗಿರುವವರ ನೆರವಿಗೆ ಧಾವಿಸಿದ್ದಾರೆ. ಮುಂಬೈ ಮಹಾನಗರಿಯಲ್ಲಿ ಗಲ್ಲಿ ಪ್ರದೇಶಗಳಲ್ಲಿ ಕಡುಬಡವರ ಪರಿಸ್ಥಿತಿ ಈಗ ದೇವರಿಗೇ ಪ್ರೀತಿ. ಮನೆಯೊಳಗೆ ಕಸ, ಕೊಳಕು ನೀರು ತುಂಬಿ ಬಡವರ ಪಾಡು ಹೇಳತೀರದಂತಾಗಿದೆ.ಅಂತಹ ಬಡವರಿಗೆ ಪುನರ್ವಸತಿ ಕಲ್ಪಿಸಲು ಮತ್ತು ಅವರ ಮನೆಯೊಳಗೆ ತುಂಬಿಕೊಂಡಿದ್ದ ಕಸ ಕಡ್ಡಿಗಳನ್ನು ಹೊರತೆಗೆಯಲು ಮುಂದಾಗಿರುವ ಅಪ್ನಾಲಯ ಸಂಸ್ಥೆಯೊಂದಿಗೆ ಸಚಿನ್ ಕೈ ಜೋಡಿಸಿದ್ದಾರೆ.ಅಪ್ನಾಲಯ