ಕೇರಳದಲ್ಲಿ ಸಚಿನ್ ಗೆ ಅವಮಾನ: ಟ್ವಿಟರ್ ನಲ್ಲಿ ಕ್ರಿಕೆಟ್ ದಿಗ್ಗಜನಿಗೆ ಬೆಂಬಲ

ಮುಂಬೈ| Krishnaveni K| Last Modified ಭಾನುವಾರ, 7 ಫೆಬ್ರವರಿ 2021 (09:24 IST)
ಮುಂಬೈ: ರೈತ ಪ್ರತಿಭಟನೆ ವಿಚಾರದಲ್ಲಿ ಬಾಹ್ಯ ಶಕ್ತಿಗಳು ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದು ಬೇಡ ಎಂದು ಹೇಳಿಕೆ ನೀಡಿದ್ದಕ್ಕೆ ಕೇರಳ ಕಾಂಗ್ರೆಸ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಭಾವಚಿತ್ರಕ್ಕೆ ಕಪ್ಪು ಆಯಿಲ್ ಸುರಿದು ಅವಮಾನ ಮಾಡಿತ್ತು.  
> ಹಲವರು ಸಚಿನ್ ಕೇಂದ್ರದ ಪರ ಮಾತನಾಡಿ ರೈತರಿಗೆ ಅವಮಾನ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆ ಬಳಿಕ ಸಚಿನ್ ಅಭಿಮಾನಿಗಳು ಟ್ವಿಟರ್ ನಲ್ಲಿ ಅವರ ಪರವಾಗಿ ‘ಐ ಸ್ಟ್ಯಾಂಡ್ ವಿತ್ ಸಚಿನ್ ತೆಂಡುಲ್ಕರ್’ ಅಭಿಯಾನ ಆರಂಭಿಸಿದ್ದಾರೆ. ಸಚಿನ್ ರೈತ ವಿರೋಧಿ ಹೇಳಿಕೆ ನೀಡಿಲ್ಲ. ಬದಲಾಗಿ ವಿದೇಶಿಯರು ನಮ್ಮ ದೇಶದ ವಿಚಾರದಲ್ಲಿ ಮೂಗು ತೂರಿಸಿದ್ದಕ್ಕೆ ಕಿಡಿ ಕಾರಿದ್ದಾರೆ. ಇದರಲ್ಲಿ ತಪ್ಪೇನು ಎಂದು ಸಚಿನ್ ಅಭಿಮಾನಿಗಳು ಪ್ರಶ್ನಿಸಿದ್ದಾರೆ.>


ಇದರಲ್ಲಿ ಇನ್ನಷ್ಟು ಓದಿ :