ತಂದೆಯಾದ ಕ್ರಿಕೆಟಿಗ ಅಜಿಂಕ್ಯಾ ರೆಹಾನೆಯನ್ನು ಸಚಿನ್ ತೆಂಡುಲ್ಕರ್ ಕಾಲೆಳೆದಿದ್ದು ಹೀಗೆ!

ಮುಂಬೈ| Krishnaveni K| Last Modified ಮಂಗಳವಾರ, 8 ಅಕ್ಟೋಬರ್ 2019 (09:26 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ಆಟಗಾರ ಅಜಿಂಕ್ಯಾ ರೆಹಾನೆ ಈಗ ಹೆಣ್ಣು ಮಗುವಿನ ತಂದೆಯಾದ ಖುಷಿಯಲ್ಲಿದ್ದಾರೆ. ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆಡುತ್ತಿರುವ ರೆಹಾನೆ ತಮ್ಮ ಮುದ್ದು ಮಗಳನ್ನು ನೋಡುವ ಕಾತುರದಲ್ಲಿದ್ದಾರೆ.

 
ಈ ನಡುವೆ ಕ್ರಿಕೆಟ್ ಸ್ನೇಹಿತರು ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ ಮಾಡಿದ್ದಾರೆ. ಆದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ವಿಶೇಷವಾಗಿ ಕ್ರಿಕೆಟ್ ಭಾಷೆಯಲ್ಲೇ ವಿಶ್ ಮಾಡಿ ತಮಾಷೆ ಮಾಡಿದ್ದಾರೆ.
 
‘’ಅಭಿನಂದನೆಗಳು ರೆಹಾನೆ. ಇನ್ನು ಮುಂದೆ ನೈಟ್ ವಾಚ್ ಮೆನ್ ಆಗಲು ರೆಡಿಯಾಗಿ’ ಎಂದು ಸಚಿನ್ ತಮಾಷೆಯಾಗಿ ವಿಶ್ ಮಾಡಿದ್ದಾರೆ. ರೆಹಾನೆ ಪತ್ನಿ ರಾಧಿಕಾ ಮೊನ್ನೆಯಷ್ಟೇ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :