ಮುಂಬೈ: ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾದಲ್ಲಿ ಯಾರು ಈ ಸರಣಿಯಲ್ಲಿ ಹೆಚ್ಚು ಉಪಯುಕ್ತ ಕೊಡುಗೆ ಸಲ್ಲಿಸಬಲ್ಲರು? ಹೀಗಂತ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಗೆ ಪ್ರಶ್ನೆ ಕೇಳಿದ್ದಕ್ಕೆ ಅವರು ಕೆಎಲ್ ರಾಹುಲ್ ಹೆಸರು ಹೇಳಿದ್ದಾರೆ. ಇಡೀ ಸರಣಿಯಲ್ಲಿ ದ.ಆಫ್ರಿಕಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಬಲ್ಲ ಒಬ್ಬ ಬ್ಯಾಟ್ಸ್ ಮನ್ ಹೆಸರು ಹೇಳಿ ಎಂದಿದ್ದಕ್ಕೆ ವಿರಾಟ್ ಕೊಹ್ಲಿಯಂತಹ ಘಟಾನುಘಟಿಯ ಹೆಸರು ಬಿಟ್ಟು ಸಚಿನ್ ಕನ್ನಡಿಗ