Widgets Magazine

ಬ್ರಿಯಾನ್ ಲಾರಾ ಕೊಟ್ಟ ವಿಶೇಷ ಉಡುಗೊರೆಯನ್ನು ಹಂಚಿಕೊಂಡ ಸಚಿನ್ ತೆಂಡುಲ್ಕರ್

ಮುಂಬೈ| Krishnaveni K| Last Modified ಮಂಗಳವಾರ, 17 ನವೆಂಬರ್ 2020 (10:09 IST)
ಮುಂಬೈ: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್ ಮತ್ತು ಬ್ರಿಯಾನ್ ಲಾರಾ ಸಮಕಾಲೀನರು. ಇವರಿಬ್ಬರೂ ತಮ್ಮ ಕ್ರಿಕೆಟಿಂಗ್ ದಿನಗಳಲ್ಲಿ ಬೌಲರ್ ಗಳ ಎದೆನಡುಗಿಸಿದವರು ಮತ್ತು ದಾಖಲೆಗಾಗಿ ಪೈಪೋಟಿ ನಡೆಸಿದವರು. ಆದರೆ ಕ್ರಿಕೆಟ್ ಹೊರತಾಗಿ ಇಬ್ಬರೂ ಉತ್ತಮ ಸ್ನೇಹಿತರು.

 
ಹೀಗಾಗಿ ಸಚಿನ್ ತಮ್ಮ ನಿವೃತ್ತಿ ದಿನ ತಮಗೆ ಲಾರಾ ಕೊಟ್ಟ ಅಪರೂಪದ ಉಡುಗೊರೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅದರ ಬಗ್ಗೆ ಮಾತನಾಡಿದ್ದಾರೆ. ಸಚಿನ್ ನಿವೃತ್ತಿ ಸಮಯದಲ್ಲಿ ಲಾರಾ ಸ್ಟೀಲ್ ಡ್ರಮ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಈ ಉಡುಗೊರೆ ತನಗೆ ಅತ್ಯಂತ ವಿಶೇಷವಾದುದು. ಇದನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಸಚಿನ್ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :