ಮುಂಬೈ: ರೈತರ ಪ್ರತಿಭಟನೆ ವಿಚಾರವಾಗಿ ಪಾಪ್ ಗಾಯಕಿ ರಿಹಾನ್ನಾ ಮಾಡಿದ ಟ್ವೀಟ್ ವಿರುದ್ಧ ಕ್ರಿಕೆಟ್ ದಿಗ್ಗಜ, ಭಾರತ ರತ್ನ ಸಚಿನ್ ತೆಂಡುಲ್ಕರ್ ಸಿಡಿದೆದ್ದಿದ್ದಾರೆ.ನಮ್ಮ ದೇಶದ ವಿಚಾರದಲ್ಲಿ ಹೊರಗಿನವರು ಮೂಗು ತೂರಿಸಲು ಅವಕಾಶ ಕೊಡಬಾರದು ಎಂದು ಖಡಕ್ ಆಗಿ ಟ್ವೀಟ್ ಮಾಡಿರುವ ಸಚಿನ್, ದೇಶದ ಐಕ್ಯತೆ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ. ‘ಭಾರತದ ಸಾರ್ವಭೌಮತೆ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಬಾರದು. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಿರಬೇಕೇ ಹೊರತು, ಸಹಭಾಗಿಗಳಾಗಬಾರದು. ಭಾರತಕ್ಕೆ ಏನು ಬೇಕು ಎಂದು