Widgets Magazine

ಪ್ರಧಾನಿ ಮೋದಿ ಫಿಟ್ ಇಂಡಿಯಾ ಕನಸಿಗೆ ಬೆಂಬಲವಾಗಿ ನಿಂತ ಸಚಿನ್ ತೆಂಡುಲ್ಕರ್

ನವದೆಹಲಿ| Krishnaveni K| Last Modified ಶುಕ್ರವಾರ, 30 ಆಗಸ್ಟ್ 2019 (09:53 IST)
ನವದೆಹಲಿ: ನಿನ್ನೆಯಷ್ಟೇ ಫಿಟ್ ಇಂಡಿಯಾ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅದನ್ನು ಬೆಂಬಲಿಸಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.

 

ಸಚಿನ್ ರಾಜ್ಯ ಸಭಾ ಸದಸ್ಯರಾಗಿದ್ದಾಗ ಸಂಸತ್ತಿನಲ್ಲೂ ಇದೇ ವಿಷಯವನ್ನು ಪ್ರಸ್ತಾಪಿಸಲು ಒಮ್ಮೆ ಯತ್ನಿಸಿದ್ದರು. ಆದರೆ ಸಂಸದರ ಗದ್ದಲದಿಂದಾಗಿ ಅವರಿಗೆ ಇದು ಸಾಧ್ಯವಾಗಿರಲಿಲ್ಲ. ಈಗ ಪ್ರಧಾನಿ ಮೋದಿ ನಿನ್ನೆ ಈ ಅಭಿಯಾನಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಅದನ್ನು ಬೆಂಬಲಿಸಿದ್ದಾರೆ.
 
ವೃದ್ಧಾಶ್ರಮಕ್ಕೆ ತೆರಳಿ ಅಲ್ಲಿನ ವೃದ್ಧೆಯರೊಂದಿಗೆ ಕೇರಂ ಆಡಿ ಸಚಿನ್ ಫಿಟ್ ಇಂಡಿಯಾ ಅಭಿಯಾನವನ್ನು ಬೆಂಬಲಿಸುವುದಾಗಿ ಬರೆದುಕೊಂಡಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಹೇಳಿದ ಹಾಗೆ ಎಲ್ಲರೂ ಆಡೋಣ, ಫಿಟ್ ಆಗಿರೋಣ ಎಂದು ಸಚಿನ್ ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :