Widgets Magazine

ಬುಡಕಟ್ಟು ಜನಾಂಗದ ಬಡ ಮಕ್ಕಳಿಗೆ ನೆರವಾಗಲಿರುವ ಸಚಿನ್ ತೆಂಡುಲ್ಕರ್

ಮುಂಬೈ| Krishnaveni K| Last Modified ಸೋಮವಾರ, 14 ಸೆಪ್ಟಂಬರ್ 2020 (09:58 IST)
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಬುಡಕಟ್ಟು ಜನಾಂಗದ ಬಡ ಮಕ್ಕಳಿಗೆ ನೆರವಾಗಲು ಎನ್ ಜಿಒ ಜತೆ ಕೈ ಜೋಡಿಸಿದ್ದಾರೆ.

 
‘ಎನ್ ಜಿಒ ಪರಿವಾರ್’ ಜತೆ ಕೈ ಜೋಡಿಸಿರುವ ತೆಂಡುಲ್ಕರ್ ಸುಮಾರು 560 ಬುಡಕಟ್ಟು ಮಕ್ಕಳಿಗೆ ಆರ್ಥಿಕವಾಗಿ ನೆರವು ನೀಡಲು ನಿರ್ಧರಿಸಿದ್ದಾರೆ. ಮಧ್ಯಪ್ರದೇಶದ ಬುಡಕಟ್ಟು ಜನಾಂಗದ ಬಡ ಮಕ್ಕಳು ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ, ಇವರಿಗೆ ವಿದ್ಯಾಭ್ಯಾಸಕ್ಕೂ ಸೌಕರ್ಯವಿಲ್ಲ. ಹೀಗಾಗಿ ಈ ಯೋಜನೆಗಳಿಗೆ ಸಚಿನ್ ನೆರವು ನೀಡಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :