Widgets Magazine

ಲಾರಿಯಸ್ ಸ್ಪೋರ್ಟ್ಸ್ ಮೊಮೆಂಟ್ ಅವಾರ್ಡ್ ಗೆದ್ದ ಸಚಿನ್ ತೆಂಡುಲ್ಕರ್

ಬರ್ಲಿನ್| Krishnaveni K| Last Modified ಮಂಗಳವಾರ, 18 ಫೆಬ್ರವರಿ 2020 (09:38 IST)
ಬರ್ಲಿನ್: 2000-2020 ನೇ ಸಾಲಿನ ಲಾರಿಯಸ್ ಸ್ಪೋಟ್ಸ್ರಿಂಗ್ ಮೊಮೆಂಟ್ ಅವಾರ್ಡ್ ಸಚಿನ್ ತೆಂಡುಲ್ಕರ್ ಪಾಲಾಗಿದೆ. 2011 ರ ವಿಶ್ವಕಪ್ ಗೆದ್ದ ಬಳಿಕ ಸಚಿನ್ ರನ್ನು ಸಹ ಆಟಗಾರರು ಹೆಗಲ ಮೇಲೆ ಹೊತ್ತು ಮೈದಾನಕ್ಕೆ ಸುತ್ತು ಹಾಕಿದ ಘಟನೆಗೆ ಈ ಪ್ರಶಸ್ತಿ ಸಂದಾಯವಾಗಲಿದೆ.

 
ಅತೀ ಹೆಚ್ಚು ವೀಕ್ಷಕರ ವೋಟ್ ಪಡೆದ ಸಚಿನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬರ್ಲಿನ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಟೆನಿಸ್ ದಿಗ್ಗಜ ಬ್ರಾಸ್ ಬೆಕರ್ ಪ್ರಶಸ್ತಿ ವಿಜೇತರ ಘೋಷಣೆ ಮಾಡಿದ್ದು, ಕ್ರಿಕೆಟ್ ದಿಗ್ಗಜ ಸ್ಟೀವ್ ವಾ ಸಚಿನ್ ಗೆ ಟ್ರೋಫಿ ಹಸ್ತಾಂತರಿಸಿದ್ದಾರೆ.
 
‘ಇದೊಂದು ಅದ್ಭುತ ಗಳಿಗೆ. ಇಡೀ ದೇಶವೇ ನಮ್ಮ ಜತೆಗೆ ಸಂಭ್ರಮಿಸುವ ಏಕೈಕ ಕ್ಷಣವಿದು. ವಿಶ್ವಕಪ್ ಗೆಲುವು ಎನ್ನುವುದು ವರ್ಣಾತೀತ ಖುಷಿಯ ಕ್ಷಣ. ಈಗಲೂ ಆ ಕ್ಷಣವನ್ನು ನೋಡಿದರೆ ಅದು ನನ್ನ ಜತೆಗೇ ಇರುವಂತೆ ಅನಿಸುತ್ತದೆ’ ಎಂದು ಸಚಿನ್ ಪ್ರಶಸ್ತಿ ಗೆದ್ದ ಬಳಿಕ ಭಾವುಕರಾಗಿ ಮಾತನಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :