ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಇದೀಗ ಮೊದಲ ಬಾರಿಗೆ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವಾರ ಬಿಡುಗಡೆಯಾಗಲಿರುವ ಅವರ ಜೀವನಾಧಾರಿತ ಚಿತ್ರ ಸಚಿನ್: ಎ ಬಿಲಿಯನ್ ಡ್ರೀಮ್ ನ್ನು ವಿಶೇಷ ಅತಿಥಿಗಳಿಗೆ ಪ್ರದರ್ಶನ ಮಾಡಿದ್ದಾರೆ. ಮೊದಲ ಬಾರಿಗೆ ತಮ್ಮ ಚಿತ್ರವನ್ನು ಸಚಿನ್ ತೋರಿಸಿರುವುದು ದೇಶ ಕಾಯುವ ಸೈನಿಕರಿಗೆ. ಇದನ್ನು ಟ್ವಿಟರ್ ನಲ್ಲಿ ಸಚಿನ್ ಖುಷಿಯಿಂದಲೇ ಹಂಚಿಕೊಂಡಿದ್ದಾರೆ. ಸಚಿನ್ ಭಾರತೀಯ ಸೇನೆಯ ಗೌರವಾನ್ವಿತ ಸದಸ್ಯರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.ನಾನು