ಮತ್ತೆ ಸುದ್ದಿಯಾದ ಸೌರವ್ ಗಂಗೂಲಿ ಪುತ್ರಿ ಸನಾ

ಕೋಲ್ಕೊತ್ತಾ| Krishnaveni K| Last Modified ಸೋಮವಾರ, 30 ಡಿಸೆಂಬರ್ 2019 (10:33 IST)
ಕೋಲ್ಕೊತ್ತಾ: ಮೊನ್ನೆಯಷ್ಟೇ ಸಿಎಎ ವಿರುದ್ಧ ಮಾಡಿದ್ದ ಪೋಸ್ಟ್ ನಿಂದಾಗಿ ಸುದ್ದಿಯಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪುತ್ರಿ ಸನಾ ಈಗ ಮತ್ತೆ ಸುದ್ದಿಯಾಗಿದ್ದಾರೆ. ಅದು ಅಪ್ಪ ಗಂಗೂಲಿಯನ್ನು ಟ್ರೋಲ್ ಮಾಡಿ ಸುದ್ದಿಯಾಗಿದ್ದಾರೆ.

 
ಹಿಂದೊಮ್ಮೆ ಅಪ್ಪನ ಫೋಟೋ ನೋಡಿ ಅದೇನು ನಿಮಗೆ ಇಷ್ಟವಾಗದೇ ಇರೋದು ಎಂದು ಸನಾ ಕೇಳಿದ್ದಳು. ಇದಕ್ಕೆ ಗಂಗೂಲಿ ‘ನೀನು ದಿನೇ ದಿನೇ ಅವಿಧೇಯಳಾಗುತ್ತಿರುವೆ ಎನ್ನುವುದು ನನಗೆ ತಲೆನೋವಾಗುತ್ತಿದೆ’ ಎಂದು ಕಾಲೆಳೆದಿದ್ದರು.
 
ಇದೀಗ ಗಂಗೂಲಿ ‘ಆದಿತ್ಯವಾರ ಕೆಲಸ ಮಾಡೋದನ್ನು ಧ್ವೇಷಿಸುತ್ತೇನೆ. ಆದರೆ ಈಗ ನೋಡಿ ಆದಿತ್ಯವಾರವೂ ಕೆಲಸ ಮಾಡುತ್ತಿದ್ದೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಅಪ್ಪನ ಕಾಲೆಳೆದಿರುವ ಗಂಗೂಲಿ ‘ಭಾನುವಾರ 12 ಗಂಟೆಯವರೆಗೂ ಬೆಡ್ ನಲ್ಲೇ ಬಿದ್ದುಕೊಂಡಿರುವ ವ್ಯಕ್ತಿ. ಅಪ್ಪ ಇನ್ನೂ ನೀವು ದೂರ ಸಾಗಬೇಕಿದೆ’ ಎಂದು ಟ್ರೋಲ್ ಮಾಡಿದ್ದಾಳೆ.
ಇದರಲ್ಲಿ ಇನ್ನಷ್ಟು ಓದಿ :