Widgets Magazine

ನನ್ನ ಕುಟುಂಬದವರನ್ನು ಬಿಟ್ಟು ಬಿಡಿ! ಟೀಕಾಕಾರರಿಗೆ ಮನವಿ ಮಾಡಿದ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್

ಲಂಡನ್| Krishnaveni K| Last Modified ಮಂಗಳವಾರ, 18 ಜೂನ್ 2019 (10:14 IST)
ಲಂಡನ್: ಭಾರತದ ವಿರುದ್ಧ ವಿಶ್ವಕಪ್ ನಲ್ಲಿ ಹೀನಾಯ ಸೋಲಿನ ಬಳಿಕ ಪಾಕ್ ಕ್ರಿಕೆಟಿಗರ ಮೇಲೆ ಟೀಕಾಪ್ರಹಾರವಾಗುತ್ತಿದೆ. ಈ ನಡುವೆ ಕುಟುಂಬದವರನ್ನೂ ಟೀಕೆಗೆ ಎಳೆದು ತರುತ್ತಿರುವುದಕ್ಕೆ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 
ಭಾರತದ ಖ್ಯಾತ ಟೆನಿಸ್ ತಾರೆಯಾಗಿರುವ ಸಾನಿಯಾ ಮಿರ್ಜಾ ತಮ್ಮ ಪತಿ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಹಾಗೂ ಇತರ ಪಾಕ್ ಆಟಗಾರರೊಂದಿಗೆ ಭಾರತ ಪಂದ್ಯದ ಮುನ್ನಾದಿನ ಡಿನ್ನರ್ ಪಾರ್ಟಿ ಮಾಡುತ್ತಿದ್ದ ವಿಡಿಯೋವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
 
ಆದರೆ ಈ ವಿಡಿಯೋ ಭಾರತ ಪಂದ್ಯದ ಮುನ್ನಾದಿನ ಮಾಡಿದ್ದಲ್ಲ. ನಾವು ಡಿನ್ನರ್ ಮಾಡಿದ್ದು ಎರಡು ದಿನದ ಹಿಂದೆ. ಯಾರೋ ಅದನ್ನು ಹರಿಯಬಿಟ್ಟು ವಿನಾಕಾರಣ ನಾವು ರೂಲ್ಸ್ ಬ್ರೇಕ್ ಮಾಡಿದ್ದೇವೆಂದು ಆಪಾದಿಸುತ್ತಿದ್ದಾರೆ ಎಂದು ಮಲಿಕ್ ಸ್ಪಷ್ಟನೆ ನೀಡಿದ್ದಾರೆ.
 
ಅಷ್ಟೇ ಅಲ್ಲದೆ, ಟೀಕಾಕಾರರು ಸಾನಿಯಾ ಮಿರ್ಜಾರನ್ನೂ ಟ್ರೋಲ್ ಮಾಡುತ್ತಿರುವುದಕ್ಕೆ ‘ದಯವಿಟ್ಟು ಯಾವುದೇ ಟೀಕೆಗೆ ನಮ್ಮ ಕುಟುಂಬದವರನ್ನು ಎಳೆದುತರಬೇಡಿ. ನಿಮ್ಮ ಚರ್ಚೆಯಲ್ಲಿ ಅವರನ್ನು ಸೇರಿಸಬೇಡಿ. ಅವರಿಗೂ ಇದಕ್ಕೂ ಸಂಬಂಧವಿಲ್ಲ. ನಮ್ಮ ವೈಯಕ್ತಿಕ ಬದುಕನ್ನು ಗೌರವಿಸಿ’ ಎಂದು ಶೊಯೇಬ್ ಮನವಿ ಮಾಡಿದ್ದಾರೆ. ಅತ್ತ ಸಾನಿಯಾ ಅಂತೂ ಟ್ರೋಲ್ ಗಳಿಂದ ಬೇಸತ್ತು ಕೆಲವು ದಿನಗಳ ಕಾಲ ಟ್ವಿಟರ್ ಗೇ ಬ್ರೇಕ್ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :