ಸಿಡ್ನಿ: ಹಿಂದೊಮ್ಮೆ ರವೀಂದ್ರ ಜಡೇಜಾರನ್ನು ಸಾಮಾನ್ಯ ದರ್ಜೆಯ ಆಟಗಾರ ಎಂದು ಜರೆದಿದ್ದ ಸಂಜಯ್ ಮಂಜ್ರೇಕರ್ ನಿನ್ನೆಯ ಪಂದ್ಯದಲ್ಲಿ ಅವರ ಅದ್ಭುತ ಪ್ರದರ್ಶನದ ಬಳಿಕ ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ಜಡೇಜಾ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದರು. ಜಡೇಜಾ ಬಗ್ಗೆ ಮಾತನಾಡಿರುವ ಮಂಜ್ರೇಕರ್ ‘ಅವರು ಇವತ್ತು ಆಫ್ ಸೈಡ್, ಲೆಗ್ ಸೈಡ್ ಎರಡೂ ಬದಿಗೂ ರನ್ ಗಳಿಸಿದರು. ಹಾರ್ದಿಕ್ ಮೇಲಿದ್ದ ಒತ್ತಡ ಕಡಿಮೆ ಮಾಡಿದರು.