ಮುಂಬೈ: ಪ್ರತಿಭೆಯಿದ್ದೂ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಸಿಗದ ಹತಾಶೆಯನ್ನು ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ವಿಶಿಷ್ಟವಾಗಿ ಹೊರಹಾಕಿದ್ದಾರೆ.ರಿಷಬ್ ಪಂತ್ ಗೆ ಕಳಪೆ ಆಟದ ಹೊರತಾಗಿಯೂ ಪದೇ ಪದೇ ಅವಕಾಶ ನೀಡಲಾಗುತ್ತಿದೆ. ಆದರೆ ಸಂಜು ಸ್ಯಾಮ್ಸನ್ ಗೆ ಭಾರೀ ಒತ್ತಾಯದ ಬಳಿಕ ಲಂಕಾ ವಿರುದ್ಧದ ಒಂದೇ ಒಂದು ಪಂದ್ಯಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮತ್ತೆ ತಂಡದಿಂದ ಕೈ ಬಿಡಲಾಗಿದೆ. ಈ