ಮುಂಬೈ: ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ನ ಫಿಟ್ಟೆಸ್ಟ್ ಕ್ರಿಕೆಟರ್ ಅನ್ನುವುದರಲ್ಲಿ ಅನುಮಾನವಿಲ್ಲ. ಅವರು ಅಷ್ಟು ಫಿಟ್ ಆಗಿರಲು ಕಾರಣ ಏನು ಗೊತ್ತಾ? ಅವರು ಫಾಲೋ ಮಾಡುವ ಸ್ಟ್ರಿಕ್ಟ್ ಆಹಾರ ಕ್ರಮವೇನೋ ಹೌದು. ಅದರ ಜತೆಗೆ ಅವರು ಕುಡಿಯುವ ನೀರೂ ಕೂಡಾ ಹೌದಂತೆ. ನೀರಿನಲ್ಲೇನು ವಿಶೇಷ ಎನ್ನಬೇಡಿ. ಅವರು ಕುಡಿಯುವುದು ಮಾಮೂಲು ಬಾಟಲಿ ನೀರಲ್ಲ.ಫ್ರಾನ್ಸ್ ನಿಂದ ಸ್ಪೆಷಲ್ಲಾಗಿ ಆಮದು ಮಾಡಿಸಿಕೊಂಡ ಇವಿಯಾನ್ ಎಂಬ ಬ್ರಾಂಡ್ ನ ಬಾಟಲಿ ನೀರು.