ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಕೊಹ್ಲಿಗಿಂತಲೂ ಫಿಟ್ಟೆಸ್ಟ್ ಕ್ರಿಕೆಟಿಗ ಟೀಂ ಇಂಡಿಯಾದಲ್ಲಿದ್ದಾರೆ. ಅದು ಯಾರು ಗೊತ್ತೇ?ಅವರು ಬೇರಾರೂ ಅಲ್ಲ, ಕರ್ನಾಟಕ ಮೂಲದ ಕರುಣ್ ನಾಯರ್! ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಟೀಂ ಇಂಡಿಯಾ ಫಿಟ್ನೆಸ್ ಗುರು ಶಂಕರ್ ಬಸು ಪ್ರಕಾರ ನಾನೇ ತಂಡದ ಅತ್ಯಂತ ಫಿಟ್ಟೆಸ್ಟ್ ಆಟಗಾರ ಎಂದು ಕರುಣ್ ಹೇಳಿಕೊಂಡಿದ್ದಾರೆ.ನಾನು ಶಂಕರ್ ಸರ್ ಬಳಿ