ಮುಂಬೈ: ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಗಾದೆಯಿದೆ. ಅದೀಗ ಟೀಂ ಇಂಡಿಯಾ ಕೋಚ್ ಹುದ್ದೆಯ ವಿಚಾರದಲ್ಲಿ ಸತ್ಯವಾಗುವ ಲಕ್ಷಣ ಗೋಚರಿಸುತ್ತಿದೆ.ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ರವಿ ಶಾಸ್ತ್ರಿ ಮತ್ತು ಕೋಚ್ ಆಯ್ಕೆ ಸಮಿತಿ ಸದಸ್ಯರಾಗಿರುವ ಸೌರವ್ ಗಂಗೂಲಿ ನಡುವಿನ ತಿಕ್ಕಾಟ ಇನ್ನೊಬ್ಬ ಕೋಚ್ ಅಭ್ಯರ್ಥಿ ವೀರೇಂದ್ರ ಸೆಹ್ವಾಗ್ ಗೆ ಲಾಭವಾಗುವ ನಿರೀಕ್ಷೆ ಕಾಣುತ್ತಿದೆ.ಎಲ್ಲಾ ಸರಿಯಾಗಿದ್ದರೆ, ನಿನ್ನೆಯೇ ಹೊಸ ಕೋಚ್ ಘೋಷಣೆಯಾಗಬೇಕಿತ್ತು. ಸೆಹ್ವಾಗ್, ರವಿಶಾಸ್ತ್ರಿ ಸೇರಿದಂತೆ ಐವರು ನಿನ್ನೆ ಸಂದರ್ಶನ