ನವದೆಹಲಿ: ಸಚಿನ್ ತೆಂಡುಲ್ಕರ್ ಎಂದರೆ ವೀರೇಂದ್ರ ಸೆಹ್ವಾಗ್ ಸದಾ ಗಾಡ್ ಜೀ ಎಂದೇ ಗೌರವ ಕೊಡುತ್ತಾರೆ. ಇದೀಗ ಅದೇ ಗಾಡ್ ಜೀಯಿಂದ ಸೆಹ್ವಾಗ್ ಗೆ ಭರ್ಜರಿ ವರ ಸಿಕ್ಕಿದೆ.ಸಚಿನ್ ಪ್ರೀತಿಯಿಂದ ಸೆಹ್ವಾಗ್ ಗೆ ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯು ಸೀರೀಸ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಸೆಹ್ವಾಗ್ ಪ್ರೀತಿಯಿಂದಲೇ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.ಬಿಎಂಡಬ್ಲ್ಯು 7 ಸೀರೀಸ್ ನ ಈ ಕಾರಿನ ಬೆಲೆ ಬರೋಬ್ಬರಿ 1.14 ಕೋಟಿ ರೂ.