ನವದೆಹಲಿ: ವಿರಾಟ್ ಕೊಹ್ಲಿ ಮತ್ತು ವೀರೇಂದ್ರ ಸೆಹ್ವಾಗ್ ಇಬ್ಬರೂ ದೆಹಲಿಯ ಡ್ಯಾಶಿಂಗ್ ಹೀರೋಗಳೇ. ಇಂತಿಪ್ಪ ಸೆಹ್ವಾಗ್ ಕೊಹ್ಲಿಗೆ ಒಂದು ಅಮೂಲ್ಯ ಸಲಹೆ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಕೊಹ್ಲಿ ಮೈದಾನಕ್ಕಿಳಿದರೆ, ಮುಖಕ್ಕೆ ಮೆಣಸಿನಕಾಯಿ ಹಚ್ಚಿಕೊಂಡವರ ಹಾಗೆ ಉರಿಮುಖ ಹಾಕಿಕೊಂಡಿರುತ್ತಾರೆ. ವಿಕೆಟ್ ಬಿತ್ತು ಎಂದರೆ ಅವರ ಮುಖದ ಮೇಲಿನ ಬಣ್ಣವೇ ಬದಲಾಗುತ್ತದೆ. ಅವಕಾಶ ಸಿಕ್ಕಾಗಲೆಲ್ಲಾ ಎದುರಾಳಿಗಳ ಮೇಲೆ ಮಾತಿನಲ್ಲೂ ಕೆಣಕುತ್ತಿರುತ್ತಾರೆ.ಕೊಹ್ಲಿಯ ಈ ಸ್ವಭಾವ ಕೆಲವರಿಗೆ ಇಷ್ಟವಾಗಲ್ಲ. ಆದರೆ ಮಾಜಿ ಕ್ರಿಕೆಟಿಗ ಸೆಹ್ವಾಗ್ ಮಾತ್ರ