ನವದೆಹಲಿ: ಹೊಡೆಬಡಿಯ ಆಟಗಾರ ವೀರೇಂದ್ರ ಸೆಹ್ವಾಗ್ ಗೆ ತಮ್ಮ ಹೆಸರು ಬದಲಾಯಿಸಿಕೊಳ್ಳುವ ಆಸೆಯಂತೆ! ಅದೂ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಎಂದು! ಸಾಧ್ಯವಾಗಿದ್ದರೆ ನನ್ನ ಹೆಸರನ್ನು ಗಾಡ್ ಸಚಿನ್ ತೆಂಡುಲ್ಕರ್ ಎಂದು ಬದಲಾಯಿಸಿಕೊಳ್ಳುತ್ತಿದ್ದೆ. ಯಾಕೆಂದರೆ ಸಚಿನ್ ಮಾಡಿದ ದಾಖಲೆಗಳ ಸನಿಹವೂ ನನಗೆ ಬರಲಾಗಲಿಲ್ಲ. ಅವರು ಅಂತಹ ಅದ್ಭುತ ಆಟಗಾರ ಎಂದು ಸೆಹ್ವಾಗ್ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.ಸಚಿನ್ ತೆಂಡುಲ್ಕರ್ ಇದ್ದಾಗ ಇನ್ನೊಬ್ಬರಿಂದ ಅವರ ದಾಖಲೆಗಳನ್ನು ಮುರಿಯಲು ಸಾಧ್ಯವಾಗದು ಎಂದುಕೊಂಡಿದ್ದೆವು.