ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟಿ20 ವಿಶ್ವಕಪ್ ಸೋತ ಬಳಿಕ ತೀವ್ರ ಹತಾಶೆಗೊಳಗಾದ ಭಾರತ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ಮೈದಾನದಲ್ಲೇ ಅತ್ತ ಘಟನೆ ನಡೆದಿದೆ.ಭಾರತ ಆಲೌಟ್ ಆಗುತ್ತಿದ್ದಂತೇ ಆಸ್ಟ್ರೇಲಿಯನ್ನರು ಸಂಭ್ರಮಾಚರಿಸುತ್ತಿದ್ದರೆ, ಕುಸಿದು ಕೂತ ಶಫಾಲಿ ವರ್ಮ ಗಳ ಗಳನೆ ಅತ್ತ ದೃಶ್ಯ ಕಂಡುಬಂತು.ಈ ವೇಳೆ ನಾಯಕಿ ಹರ್ಮನ್ ಪ್ರೀತ್ ಕೌರ್ ಸೇರಿದಂತೆ ಇಡೀ ಭಾರತ ತಂಡವೇ ಅವರನ್ನು ಸುತ್ತವರೆದು ಸಮಾಧಾನಿಸಿತು. ಟೂರ್ನಿಯುದ್ಧಕ್ಕೂ ಭಾರತಕ್ಕೆ ಅದ್ಭುತ ಆರಂಭ ನೀಡಿ ಪ್ರತೀ