ನವದೆಹಲಿ: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮತ್ತು ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಮಧ್ಯೆ ಈಗಲೂ ಆಗಾಗ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಕೆಲವು ದಿನಗಳಿಂದ ತಣ್ಣಗಿದ್ದ ಇವರಿಬ್ಬರ ಮಾತಿನ ಚಕಮಕಿಗೆ ಈಗ ಮತ್ತೆ ಚಾಲನೆ ಸಿಕ್ಕಿದೆ. ಇದಕ್ಕೆ ಅಫ್ರಿದಿ ಸಂದರ್ಶನವೊಂದರಲ್ಲಿ ಗಂಭೀರ್ ಕುರಿತು ನೀಡಿದ ಹೇಳಿಕೆ ಕಾರಣ. ಒಬ್ಬ ಕ್ರಿಕೆಟಿಗನಾಗಿ ನನಗೆ ಗಂಭೀರ್ ಇಷ್ಟವಾಗಿದ್ದರು. ಆದರೆ ವ್ಯಕ್ತಿಯಾಗಿ ಅವರಲ್ಲಿ ಏನೋ ದೋಷವಿದೆ. ಅವರ ವ್ಯಕ್ತಿತ್ವದಲ್ಲಿ ಏನೋ ದೋಷವಿದೆ ಎಂಬುದನ್ನು