Widgets Magazine

ಕಾಳಿ ಪೂಜೆಯಲ್ಲಿ ಭಾಗವಹಿಸಿದ್ದಕ್ಕೆ ಪ್ರಾಣ ಬೆದರಿಕೆ: ಕ್ರಿಕೆಟಿಗ ಶಕೀಬ್ ಅಲ್ ಹಸನ್ ಗೆ ಭದ್ರತೆ

ಕೋಲ್ಕೊತ್ತಾ| Krishnaveni K| Last Updated: ಗುರುವಾರ, 19 ನವೆಂಬರ್ 2020 (09:48 IST)
ಕೋಲ್ಕೊತ್ತಾ: ಕೋಲ್ಕೊತ್ತಾದಲ್ಲಿ ನಡೆದಿದ್ದ ಹಿಂದೂ ಧರ್ಮೀಯರ ಕಾಳಿ ಪೂಜೆಯಲ್ಲಿ ಭಾಗವಹಿಸಿದ್ದಕ್ಕೆ ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಗೆ ಕೆಲವು ಮತಾಂಧರು ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಈಗ ಸಶಸ್ತ್ರ ಪಡೆಯ ಭದ್ರತೆ ಒದಗಿಸಲಾಗಿದೆ.
 

ಒಬ್ಬ ಮುಸ್ಲಿಂ ಧರ್ಮೀಯನಾಗಿ ಹಿಂದೂ ಧರ್ಮೀಯರ ಆಚರಣೆಯಲ್ಲಿ ಪಾಲ್ಗೊಂಡು ಆರತಿ ಬೆಳಗಿದ್ದಕ್ಕೆ ಕಟ್ಟಾ ಸಂಪ್ರದಾಯವಾದಿಗಳು ಬಹಿರಂಗವಾಗಿಯೇ ಶಕೀಬ್ ಗೆ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲ, ಈ ಸಂಬಂಧ ಶಕೀಬ್ ಬಹಿರಂಗ ಕ್ಷಮೆ ಯಾಚಿಸಿದರೂ ಅವರಿಗೆ ಪ್ರಾಣ ಬೆದರಿಕೆ ತಪ್ಪಲಿಲ್ಲ. ಈ ಕಾರಣಕ್ಕೆ ಈಗ ಸಶಸ್ತ್ರ ಪಡೆಯಿಂದ ಭದ್ರತೆ ಒದಗಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :