ವಿಶಾಖಪಟ್ಟಣ: 2019 ರ ಸಾಲಿನಲ್ಲಿ ಏಕದಿನ ಪಂದ್ಯಗಳಿಂದ ಅತೀ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಕ್ರಿಕೆಟಿಗ ಎನಿಸಿಕೊಳ್ಳಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಪೈಪೋಟಿ ಏರ್ಪಟ್ಟಿದೆ. ಇದರ ನಡುವೆ ಈ ರೇಸ್ ಗೆ ವಿಂಡೀಸ್ ಕ್ರಿಕೆಟಿಗ ಶೈ ಹೋಪ್ ಕೂಡಾ ಸೇರಿಕೊಂಡಿದ್ದಾರೆ.