ಟೀಂ ಇಂಡಿಯಾಗೆ ದ್ರಾವಿಡ್ ಕೋಚ್, ಶಿಖರ್ ಧವನ್ ನಾಯಕ

ಮುಂಬೈ| Krishnaveni K| Last Modified ಬುಧವಾರ, 9 ಜೂನ್ 2021 (09:59 IST)
ಮುಂಬೈ: ಶ್ರೀಲಂಕಾದಲ್ಲಿ ಸೀಮಿತ ಓವರ್ ಗಳ ಪಂದ್ಯವಾಡಲು ತೆರಳಲಿರುವ ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಲಿದ್ದು, ಶಿಖರ್ ಧವನ್ ನಾಯಕರಾಗಲಿದ್ದಾರೆ ಎಂದು ವರದಿಯಾಗಿದೆ.

 
ಈಗಾಗಲೇ ಕೊಹ್ಲಿ ನಾಯಕತ್ವದ ಒಂದು ತಂಡ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಆಡಲು ತೆರಳಿದೆ. ಇದೇ ವೇಳೆ ಇನ್ನೊಂದು ಟೀಂ ಇಂಡಿಯಾ ತಂಡ ಶ್ರೀಲಂಕಾ ಪ್ರವಾಸ ಮಾಡಲಿದೆ.
 
ಜುಲೈನಲ್ಲಿ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿರುವ ಈ ತಂಡಕ್ಕೆ ಕೊಹ್ಲಿ, ರೋಹಿತ್ ಅನುಪಸ್ಥಿತಿಯಲ್ಲಿ ಅನುಭವಿ ಶಿಖರ್ ಧವನ್ ಗೆ ನಾಯಕತ್ವ ನೀಡಲಾಗುತ್ತಿದ್ದು, ಎ ತಂಡದ ಕೋಚ್ ಆಗಿ ಅದ್ಭುತ ಕೆಲಸ ಮಾಡಿರುವ ಎನ್ ಸಿಎ ನಿರ್ದೇಶಕ, ವಾಲ್ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳುತ್ತಿವೆ. ಆದರೆ ಇದು ಇನ್ನೂ ಅಧಿಕೃತವಾಗಿಲ್ಲ.
ಇದರಲ್ಲಿ ಇನ್ನಷ್ಟು ಓದಿ :