ಬೆಂಗಳೂರು: ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಮತ್ತೆ ಗಾಯಗೊಂಡಿದ್ದು, ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿಲ್ಲ.ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಪಕ್ಕೆಲುಬಿಗೆ ಚೆಂಡು ತಗುಲಿಸಿಕೊಂಡಿದ್ದ ಶಿಖರ್ ನಿನ್ನೆಯ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ಎಡಗೈಗೆ ಗಾಯ ಮಾಡಿಕೊಂಡಿದ್ದಾರೆ. ಇದರಿಂದಾಗಿ ಮೈದಾನದಿಂದ ಹೊರನಡೆದ ಅವರು ಮತ್ತೆ ಕಣಕ್ಕಿಳಿಯಲೇ ಇಲ್ಲ.ಇದೀಗ ಧವನ್ ಗಾಯ ಗಂಭೀರವಾಗಿರುವುದರಿಂದ ನ್ಯೂಜಿಲೆಂಡ್ ಪ್ರವಾಸಕ್ಕೂ ಅವರು ತೆರಳುವುದು ಅನುಮಾನವಾಗಿದೆ. ಈಗಾಗಲೇ ಗಾಯದ ತೀವ್ರತೆ ತಿಳಿಯಲು ಎಕ್ಸ್ ರೇ ಮಾಡಿಸಿಕೊಂಡಿರುವ