ಲಂಡನ್: ಇಂಗ್ಲೆಂಡ್ ವಿರುದ್ಧ ಸರಣಿ ಸೋತು ಕಳಪೆ ಪ್ರದರ್ಶನ ನೀಡಿರುವ ಟೀಂ ಇಂಡಿಯಾವನ್ನು ಟ್ರೋಲ್ ಮಾಡಲು ಹೊರಟವರಿಗೆ ಆರಂಭಿಕ ಶಿಖರ್ ಧವನ್ ಇನ್ ಸ್ಟಾಗ್ರಾಂನಲ್ಲಿ ತಕ್ಕ ತಿರುಗೇಟು ನೀಡಿದ್ದಾರೆ.ಶಿಖರ್ ಧವನ್ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಸಹ ಆಟಗಾರರೊಂದಿಗಿನ ತಮಾಷೆಯ ಕ್ಷಣಗಳ ಫೋಟೋ ಒಂದನ್ನು ಅಪ್ ಲೋಡ್ ಮಾಡಿದ್ದರು. ಇದಕ್ಕೆ ಕೆಲವರು ಟೀಕೆ ಮಾಡಿ ಕಾಮೆಂಟ್ ಮಾಡುತ್ತಿದ್ದರು. ಇದಕ್ಕೆ ಧವನ್ ಪ್ರತಿಕ್ರಿಯಿಸಿದ್ದು, ತಿರುಗೇಟು ಕೊಟ್ಟಿದ್ದಾರೆ.ನಿಮ್ಮಷ್ಟೇ ನಮಗೂ ಸೋಲಿನಿಂದ ಬೇಸರವಾಗಿದೆ.