Widgets Magazine

ಬದಲಾದ ಬ್ಯಾಟಿಂಗ್ ಶೈಲಿಗೆ ಶಿಖರ್ ಧವನ್ ಕೊಟ್ಟ ಫನ್ನಿ ಕಾರಣವೇನು ಗೊತ್ತಾ?

ನವದೆಹಲಿ| Krishnaveni K| Last Modified ಬುಧವಾರ, 24 ಏಪ್ರಿಲ್ 2019 (06:55 IST)
ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ಆಡುವ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ತಮ್ಮ ಬದಲಾದ ಬ್ಯಾಟಿಂಗ್ ಶೈಲಿಗೆ ತಮಾಷೆಯ ಕಾರಣವೊಂದನ್ನು ನೀಡಿದ್ದಾರೆ.
 
ಐಪಿಎಲ್ ನ ಆರಂಭಿಕ ಪಂದ್ಯದಲ್ಲಿ ಪೇಲವ ಬ್ಯಾಟಿಂಗ್ ಮಾಡಿ ಟೀಕೆಗೊಳಗಾಗಿದ್ದ ಧವನ್ ಇದೀಗ ಕಳೆದೆರಡು ಪಂದ್ಯಗಳಿಂದ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದಾರೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಅವರು ಕೊಟ್ಟ ಕಾರಣವೇನು ಗೊತ್ತಾ?
 
ನಾನು ಈಗ ಸಂಪೂರ್ಣ ಸಸ್ಯಾಹಾರಿಯಾಗಿದ್ದೇನೆ. ಬಹುಶಃ ಅದೇ ಕಾರಣಕ್ಕೆ ನನ್ನ ಬ್ಯಾಟಿಂಗ್ ಬದಲಾಗಿರಬಹುದು ಎಂದು ತಮಾಷೆ ಮಾಡಿದ ಧವನ್ ಬಳಿಕ ಏನೇ ಆದರೂ ನನ್ನ ತಂಡಕ್ಕೆ ಕೊಡುಗೆ ನೀಡಲು ಸಾಧ‍್ಯವಾಗುತ್ತಿದೆಯಲ್ಲಾ  ಅದುವೇ ಖುಷಿಯ ವಿಚಾರ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       
ಇದರಲ್ಲಿ ಇನ್ನಷ್ಟು ಓದಿ :