ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ 98 ರನ್ ಗಳಿಸಿ ಪಂದ್ಯ ಶ್ರೇಷ್ಠ ಪಡೆದ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ತಾವು ಆಡುವ ಬಳಗದಲ್ಲಿ ಇಲ್ಲದೇ ಇದ್ದಾಗ ಏನು ಮಾಡುತ್ತೇನೆಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಮಾತ್ರ ಶಿಖರ್ ಗೆ ಅವಕಾಶ ಸಿಕ್ಕಿತ್ತು. ಹಿರಿಯ ಆಟಗಾರನಾಗಿ ಆಡುವ ಬಳಗದಿಂದ ಹೊರಗಿರುವಾಗ ನಿಮ್ಮ ಭಾವನೆ ಏನಾಗಿರುತ್ತದೆ ಎಂದು ವೀಕ್ಷಕ ವಿವರಣೆಕಾರರು ಪ್ರಶ್ನಿಸಿದಾಗ