ನಾಯಕನಾಗಿ ಮೊದಲ ಪಂದ್ಯದಲ್ಲೇ ಶಿಖರ್ ಧವನ್ ಮಾಡಿದ ದಾಖಲೆಗಳು

ಕೊಲೊಂಬೋ| Krishnaveni K| Last Modified ಸೋಮವಾರ, 19 ಜುಲೈ 2021 (09:23 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿದ ಶಿಖರ್ ಧವನ್ ವೈಯಕ್ತಿಕವಾಗಿ ಕೆಲವು ದಾಖಲೆಗಳನ್ನು ಮಾಡಿದ್ದಾರೆ.

 
ಧವನ್ ಭಾರತದ ಪರ ಏಕದಿನ ಪಂದ್ಯಗಳಲ್ಲಿ 25 ನೇ ನಾಯಕರಾಗಿ ಕಣಕ್ಕಿಳಿದರು. ನಿನ್ನೆ ಬ್ಯಾಟಿಂಗ್ ನಲ್ಲೂ ಮಿಂಚಿದ ಅವರು 86 ರನ್ ಗಳಿಸಿದ್ದರು. ಇದರೊಂದಿಗೆ ಏಕದಿನ ಪಂದ್ಯಗಳಲ್ಲಿ 6000 ರನ್ ಪೂರ್ತಿ ಮಾಡಿದರು. ಏಕದಿನ ಪಂದ್ಯಗಳಲ್ಲಿ 6000 ರನ್ ಪೂರ್ತಿ ಮಾಡಿದ 10 ನೇ ಭಾರತೀಯ ಬ್ಯಾಟ್ಸ್ ಮನ್ ಎನಿಸಿಕೊಂಡರು.
 
ಅಲ್ಲದೆ, ಶ್ರೀಲಂಕಾ ವಿರುದ್ಧ ಅತೀ ವೇಗದ 1000 ರನ್ ಪೂರ್ತಿ ಮಾಡಿದ ದಾಖಲೆಯನ್ನೂ ತಮ್ಮದಾಗಿಸಿಕೊಂಡರು. ತಾಳ್ಮೆಯ ಆಟವಾಡಿ ಇನಿಂಗ್ಸ್ ಕಟ್ಟಿದ ಧವನ್ ನಿನ್ನೆಯ ದಿನದಾಟದಲ್ಲಿ ಯುವ ಕ್ರಿಕೆಟಿಗರಿಗೆ ಸ್ಪೂರ್ತಿಯಾದರು.
ಇದರಲ್ಲಿ ಇನ್ನಷ್ಟು ಓದಿ :