ಶಿಖರ್ ಧವನ್ ಗೂ ಈ ವಿಚಾರದಲ್ಲಿ ಅದೃಷ್ಟವಿಲ್ಲ!

ಕೊಲೊಂಬೊ| Krishnaveni K| Last Modified ಬುಧವಾರ, 21 ಜುಲೈ 2021 (09:09 IST)
ಕೊಲೊಂಬೊ: ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ ಮೂಲಕ ನಾಯಕರಾದ ಶಿಖರ್ ಧವನ್ ರಿಂದಲೂ ಟೀಂ ಇಂಡಿಯಾ ಹಣೆಬರಹ ಬದಲಾಗಿಲ್ಲ!

 
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಸದಾ ಟಾಸ್ ಸೋಲುತ್ತಲೇ ಇರುತ್ತದೆ. ಇದರಿಂದಾಗಿ ಕೊಹ್ಲಿಗೆ ಟಾಸ್ ಗೆಲ್ಲುವ ಅದೃಷ್ಟವಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಈ  ವಿಚಾರದಲ್ಲಿ ಕೊಹ್ಲಿ ದಾಖಲೆಯನ್ನೇ ಮಾಡಿದ್ದಾರೆ!
 
ಧವನ್ ನಾಯಕರಾದ ಮೇಲಾದರೂ ಟೀಂ ಇಂಡಿಯಾ ಟಾಸ್ ಗೆಲ್ಲಬಹುದು ಎಂಬ ಲೆಕ್ಕಾಚಾರ ಉಲ್ಟಾ ಆಗಿದೆ. ಧವನ್ ಕಳೆದ ಎರಡು ಪಂದ್ಯಗಳಿಂದ ಟಾಸ್ ಸೋತಿದ್ದಾರೆ. ಸತತವಾಗಿ ಟೀಂ ಇಂಡಿಯಾ ಟಾಸ್ ಸೋತು ಮೊದಲು ಫೀಲ್ಡಿಂಗ್ ಮಾಡಿದೆ. ಹೀಗಾಗಿ ನಾಯಕ ಬದಲಾದರೂ ಟೀಂ ಇಂಡಿಯಾಗೆ ಟಾಸ್ ಗೆಲ್ಲುವ ಅದೃಷ್ಟ ಮಾತ್ರ ಕೂಡಿಬಂದಿಲ್ಲ.
ಇದರಲ್ಲಿ ಇನ್ನಷ್ಟು ಓದಿ :