ನವದೆಹಲಿ: ದುಬೈ ಮಾರ್ಗವಾಗಿ ದ. ಆಫ್ರಿಕಾಗೆ ತೆರಳುತ್ತಿದ್ದ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಜತೆಗಿದ್ದ ಪತ್ನಿ ಆಯೆಷಾ ಮತ್ತು ಪುತ್ರನಿಗೆ ದುಬೈ ವಿಮಾನ ನಿಲ್ದಾಣದಿಂದ ಆಫ್ರಿಕಾ ವಿಮಾನವೇರಲು ಅವಕಾಶ ನಿರಾಕರಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಆಯೆಷಾ ಮತ್ತು ಪುತ್ರನ ಜನನ ನೋಂದಣಿ ಪತ್ರ ಮತ್ತು ಇತರ ದಾಖಲೆಗಳನ್ನು ಎಮಿರೇಟ್ಸ್ ವಿಮಾನ ಯಾನ ಸಿಬ್ಬಂದಿ ಕೇಳಿದ್ದು, ಇದು ತಕ್ಷಣದಲ್ಲಿ ಅವರ ಬಳಿ ಇರಲಿಲ್ಲ. ಇದೇ ಕಾರಣಕ್ಕೆ ಧವನ್ ಜತೆಗೆ ದ.ಆಫ್ರಿಕಾ