ನವದೆಹಲಿ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್ ಮೊನ್ನೆಯಷ್ಟೇ ಹ್ಯಾಮಿಲ್ಟನ್ ನಲ್ಲಿ ಕ್ರಿಕೆಟ್ ಆಡುವಾಗ ಚೆಂಡು ತಲೆಗೆ ಬಡಿದು ಗಾಯ ಮಾಡಿಕೊಂಡಿದ್ದರು. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್, ಮಲಿಕ್ ಆರೋಗ್ಯ ವಿಚಾರಿಸಿದ್ದಾರೆ. ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಶಿಖರ್ ಧವನ್ ಗೆಳೆಯ ಶೊಯೇಬ್, ನೀನು ಸುರಕ್ಷಿತವಾಗಿದ್ದೀಯಾ ಎಂದುಕೊಳ್ಳುತ್ತೇನೆ, ಸದ್ಯದಲ್ಲೇ ಫಿಟ್ ಆಗಿ ಕ್ರಿಕೆಟ್ ಅಂಗಣಕ್ಕೆ ಮರಳುತ್ತೀಯಾ ಎಂದುಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದರು.ಭಾರತೀಯ