ರೋಹಿತ್ ಶರ್ಮಾರನ್ನು ಪಾಕ್ ದೈತ್ಯ ಇಂಜಮಾಮ್ ಗೆ ಹೋಲಿಸಿದ ಶೊಯೇಬ್ ಅಖ್ತರ್

ನವದೆಹಲಿ| Krishnaveni K| Last Modified ಮಂಗಳವಾರ, 8 ಅಕ್ಟೋಬರ್ 2019 (09:22 IST)
ನವದೆಹಲಿ: ದ.ಆಫ್ರಿಕಾ ಮೊದಲ ಟೆಸ್ಟ್ ನ ಎರಡೂ ಇನಿಂಗ್ಸ್ ಗಳಲ್ಲಿ ಶತಕ ಗಳಿಸಿದ್ದ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾರನ್ನು ಭಾರತದ ಇಂಜಮಾಮ್ ಉಲ್ ಹಕ್ ಎಂದು ಶೊಯೇಬ್ ಅಖ್ತರ್ ಬಣ್ಣನೆ ಮಾಡಿದ್ದಾರೆ.

 
ಇಂಜಮಾಮ್ ಉಲ್ ಹಕ್ ಪಾಕಿಸ್ತಾನದ ಮಾಜಿ ನಾಯಕ ಮತ್ತು ಬ್ಯಾಟ್ಸ್ ಮನ್. ಅವರನ್ನು ಔಟ್ ಮಾಡುವುದೇ ಬೌಲರ್ ಗಳಿಗೆ ಸವಾಲಾಗಿತ್ತು. ಹೀಗಾಗಿ ಇಂಜಮಾಮ್ ಗೆ ರೋಹಿತ್ ರನ್ನು ಅಖ್ತರ್ ಹೋಲಿಕೆ ಮಾಡಿದ್ದಾರೆ.
 
‘ರೋಹಿತ್ ಗೆ ವೀರೇಂದ್ರ ಸೆಹ್ವಾಗ್ ಗಿಂತಲೂ ಉತ್ತಮ ತಂತ್ರಗಾರಿಕೆಯಿದೆ. ಅವರ ಟೈಮಿಂಗ್ ಅತ್ಯುತ್ತಮವಾಗಿದೆ, ವೈವಿದ್ಯಮಯ ಶಾಟ್ ಹೊಡೆಯುತ್ತಾರೆ. ಅವರನ್ನು  ನೋಡುತ್ತಿದ್ದರೆ ನನಗೆ ಇಂಜಮಾಮ್ ನೆನಪಾಗುತ್ತಾರೆ. ರೋಹಿತ್ ಒಂಥರಾ ಭಾರತದ ಇಂಜಮಾಮ್ ಉಲ್ ಹಕ್’ ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :