ಗಂಗೂಲಿ ಇದಕ್ಕೆಲ್ಲಾ ಒಪ್ಪಲ್ಲ ಎಂದು ಜಾಣನಂತೆ ನುಡಿದ ಪಾಕ್ ವೇಗಿ ಶೊಯೇಬ್ ಅಖ್ತರ್

ಮುಂಬೈ| Krishnaveni K| Last Modified ಮಂಗಳವಾರ, 7 ಜನವರಿ 2020 (09:26 IST)
ಮುಂಬೈ: ಐಸಿಸಿ ಟೆಸ್ಟ್ ಕ್ರಿಕೆಟ್ ನ ರೋಚಕತೆ ಹೆಚ್ಚಿಸಲು ಐದು ದಿನಗಳ ಬದಲಾಗಿ ನಾಲ್ಕು ದಿನಗಳ ಟೆಸ್ಟ್ ಆಡಿಸಲು ತೀರ್ಮಾನಿಸಿದ್ದರೆ ಜಾಗತಿಕ ಕ್ರಿಕೆಟ್ ನಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

 
ಅದರಲ್ಲೂ ಆಸ್ಟ್ರೇಲಿಯಾ, ಭಾರತ ಸೇರಿದಂತೆ ಪ್ರಮುಖ ಕ್ರಿಕೆಟ್ ಆಡುವ ರಾಷ್ಟ್ರಗಳ ದಿಗ್ಗಜರೇ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಇನ್ನೂ ಈ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸಿಲ್ಲ.
 
ಆದರೆ ಇದಕ್ಕೂ ಮೊದಲೇ ಪಾಕ್ ವೇಗಿ ಶೊಯೇಬ್ ಅಖ್ತರ್ ಗಂಗೂಲಿ ಇದಕ್ಕೆಲ್ಲಾ ಒಪ್ಪಲ್ಲ ಎನಿಸುತ್ತದೆ ಎಂದು ಜಾಣತನದಿಂದ ಪ್ರತಿಕ್ರಿಯಿಸಿದ್ದಾರೆ. ನಾಲ್ಕು ದಿನಗಳ ಟೆಸ್ಟ್ ಗೆ ವಿರೋಧ ವ್ಯಕ್ತಪಡಿಸಿರುವ ಪಾಕ್ ಮಾಜಿ ವೇಗಿ ಬಹುಶಃ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿರುವ ಗಂಗೂಲಿ ಕೂಡಾ ಇದಕ್ಕೆಲ್ಲಾ ಒಪ್ಪಲ್ಲ ಎನಿಸುತ್ತದೆ. ಟೆಸ್ಟ್ ಕ್ರಿಕೆಟ್ ಅಳಿಯುವುದಕ್ಕೆ ಅವರು ಬಿಡಲ್ಲ ಎಂದು ಐಸಿಸಿಗೆ ಸೆಡ್ಡು ಹೊಡೆಯಲು ಗಂಗೂಲಿಯನ್ನೇ ಅಸ್ತ್ರವಾಗಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :