Widgets Magazine

ಮ್ಯಾಚ್ ಫಿಕ್ಸಿಂಗ್ ಮಾಡಲು ಐಷಾರಾಮಿ ಕಾರಿನ ಆಫರ್ ನೀಡಿದ್ದರು ಎಂದ ಶೊಯೇಬ್ ಅಖ್ತರ್

ಇಸ್ಲಾಮಾಬಾದ್| Krishnaveni K| Last Modified ಸೋಮವಾರ, 4 ನವೆಂಬರ್ 2019 (09:00 IST)
ಇಸ್ಲಾಮಾಬಾದ್: ಬಾಂಗ್ಲಾದೇಶ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಮ್ಯಾಚ್ ಫಿಕ್ಸಿಂಗ್ ಕಳಂಕದಲ್ಲಿ ಎರಡು ವರ್ಷಗಳ ಕಾಲ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾದ ಬೆನ್ನಲ್ಲೇ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ತಮಗೂ ಇಂತಹ ಆಫರ್ ಗಳು ಬರುತ್ತಿದ್ದವು ಎಂದಿದ್ದಾರೆ.

 
ನಾನು ಆಡುವ ಕಾಲದಲ್ಲಿ ಮ್ಯಾಚ್ ಫಿಕ್ಸರ್ ಗಳು ನನ್ನ ಸುತ್ತಲೇ ಇದ್ದರು. ಪಂದ್ಯ ಫಿಕ್ಸ್ ಮಾಡಿದರೆ ಮಿಲಿಯನ್ ಡಾಲರ್ ಹಣ, ಐಷಾರಾಮಿ ಕಾರಿನ ಆಮಿಷವೊಡ್ಡಿದ್ದರು ಎಂದು ಅಖ್ತರ್ ಹೇಳಿದ್ದಾರೆ.
 
‘ವ್ಯಕ್ತಿಯೊಬ್ಬ ನನ್ನ ಮನೆ ಬಾಗಿಲಿಗೆ ಬಂದು ಮ್ಯಾಚ್ ಫಿಕ್ಸ್ ಮಾಡಲು ಮಿಲಿಯನ್ ಡಾಲರ್ ಹಣ, ಎಸ್ ಕ್ಲಾಸ್ ಮರ್ಸಿಡಸ್ ಕಾರು, ಐಷಾರಾಮಿ ಫ್ಲ್ಯಾಟ್ ನೀಡುವುದಾಗಿ ಆಫರ್ ನೀಡಿದ್ದ. ಆದರೆ ನಾನು ಆತನನ್ನು ಮುಲಾಜಿಲ್ಲದೇ ಹೊರಗೆ ಕಳುಹಿಸಿದೆ’ ಎಂದು ಅಖ್ತರ್ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :