ಇಸ್ಲಾಮಾಬಾದ್: ಒಂದು ಕಾಲದಲ್ಲಿ ವಿಶ್ವದ ಘಟಾನುಘಟಿ ಬ್ಯಾಟ್ಸ್ ಮನ್ ಗಳಿಗೆ ಸವಾಲಾಗಿದ್ದ ಶೊಯೇಬ್ ಅಖ್ತರ್ ಪಾಕಿಸ್ತಾನ ಕ್ರಿಕೆಟ್ ತಂಡದ ಬೆಂಕಿಯುಂಡೆಯಾಗಿದ್ದರು. ಆದರೆ ನಿವೃತ್ತರಾದ ಮೇಲೆ ಸೈಲೆಂಟ್ ಆಗಿದ್ದ ಅಖ್ತರ್ ಇದೀಗ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುತ್ತಿದ್ದಾರಂತೆ.ಹಾಗಂತ ಅವರೇ ತಮ್ಮ ಟ್ವಿಟರ್ ಪೇಜ್ ನಲ್ಲಿ ವಿಡಿಯೋ ಸಂದೇಶ ಹಾಕಿದ್ದಾರೆ. ಫೆಬ್ರವರಿ 14 ರ ದಿನವನ್ನು ಗುರುತು ಹಾಕಿಕೊಳ್ಳಿ. ಮತ್ತೆ ಕ್ರಿಕೆಟ್ ಗೆ ಮರಳುತ್ತಿದ್ದೇನೆ. ಮಕ್ಕಳೇ.. ವೇಗ ಎಂದರೇನು ಎಂದು ನಾನು ತೋರಿಸಿಕೊಡ್ತೀನಿ