ನವದೆಹಲಿ: ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಧೋನಿ ನಿವೃತ್ತಿಗೆ ಮಾಜಿ ಕ್ರಿಕೆಟಿಗರು ಒತ್ತಾಯಿಸುತ್ತಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೋಚ್ ರವಿ ಶಾಸ್ತ್ರಿ ಕೆಲವರು ಧೋನಿಯನ್ನು ಕಂಡರೆ ಆಗದು ಎಂದು ತಿರುಗೇಟು ನೀಡಿದ್ದಾರೆ. ಕೆಲವರು ಧೋನಿ ವೃತ್ತಿ ಜೀವನ ಕೊನೆಗೊಳ್ಳುವುದನ್ನೇ ಕಾಯುತ್ತಿದ್ದಾರೆ. ಧೋನಿ ಒಬ್ಬ ಟೀಂ ಮ್ಯಾನ್. ಅದಕ್ಕೇ ಕೆಲವರಿಗೆ ಅವರನ್ನು ಕಂಡರೆ ಹೊಟ್ಟೆಯುರಿ. ಅವರ ವೃತ್ತಿ ಜೀವನ ಯಾವಾಗ ಕೊನೆಗೊಳ್ಳುತ್ತದೋ ಎಂದು ಕಾಯುತ್ತಿದ್ದಾರೆ ಎಂದು ರವಿಶಾಸ್ತ್ರಿ ಟೀಕಾಕಾರರಿಗೆ ಖಾರವಾಗಿ ತಿರುಗೇಟು