ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಹೆಸರು ಅನೇಕ ಕ್ರಿಕೆಟಿಗರ ಜತೆ ಥಳುಕು ಹಾಕಿಕೊಳ್ಳುತ್ತಿದೆ. ಇದೀಗ ನಟಿ ಸೋನಲ್ ಚೌಹಾನ್ ಜತೆ ರಾಹುಲ್ ಹೆಸರು ಕೇಳಿಬಂದಿದೆ.ಇದಕ್ಕೆ ಸ್ವತಃ ಸೋನಲ್ ಸ್ಪಷ್ಟನೆ ನೀಡಿದ್ದಾರೆ. ನೀವು ರಾಹುಲ್ ಜತೆ ಡೇಟಿಂಗ್ ನಡೆಸುತ್ತಿರುವುದು ನಿಜವೇ ಎಂದು ಕೇಳಿದ್ದಕ್ಕೆ ಖಂಡಿತಾ ಇಲ್ಲ ಎಂದಿದ್ದಾರೆ.ಇದಕ್ಕೂ ಮೊದಲು ನಟಿ ನಿಧಿ ಅಗರ್ವಾಲ್, ಬಳಿಕ ಆಕಾಂಕ್ಷ ರಂಜನ್ ಜತೆ ರಾಹುಲ್ ಹೆಸರು ಥಳುಕು ಹಾಕಿಕೊಂಡಿತ್ತು. ಇದೀಗ ಸೋನಲ್ ಸರದಿ.