ಫೋಟೋ ಎಡವಟ್ಟು: ಯುವರಾಜ್ ಸಿಂಗ್ ರಿಂದ ಟ್ರೋಲ್ ಗೊಳಗಾದ ಸೌರವ್ ಗಂಗೂಲಿ

ಮುಂಬೈ| Krishnaveni K| Last Modified ಗುರುವಾರ, 13 ಫೆಬ್ರವರಿ 2020 (09:44 IST)
ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪ್ರಕಟಿಸುವಾಗ ಎಡವಟ್ಟು ಮಾಡಿ ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಗೆಳೆಯ ಯುವರಾಜ್ ಸಿಂಗ್ ಸಿಂಗ್ ರಿಂದ ತೀವ್ರವಾಗಿ ಟ್ರೋಲ್ ಗೊಳಗಾಗಿದ್ದಾರೆ.

 
ಇನ್ ಸ್ಟಾಗ್ರಾಂನಲ್ಲಿ  ರಾಹುಲ್ ದ್ರಾವಿಡ್ ಜತೆಗಿನ ಹಳೆಯ ಫೋಟೋ ಒಂದನ್ನು ಪ್ರಕಟಿಸಿದ್ದರು. ಆದರೆ ಈ ಫೋಟೋದಲ್ಲಿ ಗೆಟ್ಟಿ ಇಮೇಜಸ್ ಕ್ರೆಡಿಟ್ ಮಾರ್ಕ್ ಇತ್ತು. ಇದನ್ನು ತೆಗೆಯಲು ಮರೆತು ಹಾಗೆಯೇ ಪ್ರಕಟಿಸಿದ ಗಂಗೂಲಿಗೆ ಯುವಿ ಸೇರಿದಂತೆ ಅಭಿಮಾನಿಗಳು ಇನ್ನಿಲ್ಲದಂತೆ ಕಾಲೆಳೆದಿದ್ದಾರೆ.
 
‘ದಾದ ಮೊದಲು ಫೋಟೋ ಮೇಲಿನ ಕ್ರೆಡಿಟ್ ಮಾರ್ಕ್ ತೆಗೆಯಿರಿ. ನೀವು ಈಗ ಬಿಸಿಸಿಐ ಅಧ್ಯಕ್ಷ ಎನ್ನುವುದನ್ನು ಮರೆಯಬೇಡಿ. ಸ್ವಲ್ಪ ಪ್ರೊಫೆಷನಲ್ ಆಗಿ ದಾದ’ ಎಂದು ಯುವಿ ತಮಾಷೆ ಮಾಡಿದ್ದಾರೆ. ಯುವಿ ಕಾಮೆಂಟ್ ಗೆ ಇತರ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ಬಹುಶಃ ದಾದ ಗೆಟ್ಟಿ ಇಮೇಜ್ ನ್ನು ಖರೀದಿಸಿರಬೇಕು ಎಂದು ಕಾಲೆಳೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :