ಬೆಂಗಳೂರು: ಒಂದು ಕಾಲದಲ್ಲಿ ಟೀಂ ಇಂಡಿಯಾದ ನಾಯಕರಾಗಿದ್ದಾಗ ಸೌರವ್ ಗಂಗೂಲಿಗೆ ಸಮರ್ಥ ಉಪನಾಯಕನಾಗಿ ಸಾಥ್ ಕೊಟ್ಟವರು ರಾಹುಲ್ ದ್ರಾವಿಡ್. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿರುವ ಗಂಗೂಲಿಗೆ ಅದೇ ದ್ರಾವಿಡ್ ಜತೆಯಾಗಿದ್ದಾರೆ.ಭಾರತೀಯ ಕ್ರಿಕೆಟ್ ನ್ನು ಸುಧಾರಿಸಲು ಹಲವು ಕ್ರಮ ಕೈಗೊಳ್ಳಲುದ್ದೇಶಿಸಿರುವ ಗಂಗೂಲಿ ಮೊದಲನೆಯದಾಗಿ ನ್ಯಾಷನಲ್ ಕ್ರಿಕೆಟ್ ಅಕಾಡಮಿಯಿಂದಲೇ ಕೆಲಸ ಶುರು ಮಾಡಿದ್ದಾರೆ. ಸದ್ಯಕ್ಕೆ ಎನ್ ಸಿಎ ಅಧ್ಯಕ್ಷರಾಗಿರುವುದು ರಾಹುಲ್ ದ್ರಾವಿಡ್. ಹೀಗಾಗಿ ಬೆಂಗಳೂರಿಗೆ ಬಂದಿರುವ ಗಂಗೂಲಿ ಸ್ವತಃ ದ್ರಾವಿಡ್