ಮುಂಬೈ: ಕೋಚ್ ಆಗುವವರಿಗೆ ಉತ್ತಮವಾಗಿ ಪೇಪರ್ ಪ್ರೆಸೆಂಟೇಷನ್ ಮಾಡಲು ಬಂದರೆ ಸಾಲದು. ಆಟಗಾರರನ್ನು ಹೇಗೆ ನಿಭಾಯಿಸಬೇಕು ಎನ್ನುವುದು ತಿಳಿದಿರಬೇಕು. ಹೀಗೆಂದು ಹೇಳುವ ಮೂಲಕ ಭಾರತ ತಂಡದ ಕೋಚ್ ಆಯ್ಕೆ ಸಮಿತಿಯ ಸದಸ್ಯ ಸೌರವ್ ಗಂಗೂಲಿ ಮಾಜಿ ಕೋಚ್ ಅನಿಲ್ ಕುಂಬ್ಳೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟರೇ?ಅವರ ಹೇಳಿಕೆಯನ್ನು ಗಮನಿಸಿದರೆ ಹೌದು ಎನಿಸುತ್ತದೆ. ಅಂತಿಮವಾಗಿ ನಾಯಕನೇ ಬಾಸ್. ಕೋಚ್ ಎಲ್ಲರನ್ನೂ ಸಮತೋಲನದಿಂದ ಕೊಂಡೊಯ್ಯುವವ ಎಂದು ಗಂಗೂಲಿ ಕುಂಬ್ಳೆ ವಿಚಾರವನ್ನು ಪರೋಕ್ಷವಾಗಿ ಕೆಣಕಿದ್ದಾರೆ.ಕುಂಬ್ಳೆ ತಂಡದ