ಅಮಿತ್ ಶಾ ಭೇಟಿಯಾದ ಗಂಗೂಲಿ: ರೂಮರ್ ಗಳಿಗೆ ಬ್ರೇಕ್ ಹಾಕಿದ ದಾದ

ಮುಂಬೈ, ಬುಧವಾರ, 16 ಅಕ್ಟೋಬರ್ 2019 (09:34 IST)

ಮುಂಬೈ: ಬಿಸಿಸಿಐನ ನಿಯೋಜಿತ ಅಧ್ಯಕ್ಷ ಸೌರವ್ ಗಂಗೂಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದರ ಹಿಂದಿನ ಕಾರಣವೇನೆಂದು ಸ್ಪಷ್ಟಪಡಿಸಿದ್ದಾರೆ.
 


ಗಂಗೂಲಿ ಅಧ್ಯಕ್ಷ ಪಟ್ಟಕ್ಕೆ ನಾಮಪತ್ರ ಸಲ್ಲಿಸಿದ್ದರೆ ಅಮಿತ್ ಶಾ ಪುತ್ರ ಜಯ್ ಶಾ ಕಾರ್ಯದರ್ಶಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಗಂಗೂಲಿ ಅಮಿತ್ ಶಾರನ್ನು ಬೇಟಿಯಾಗಿದ್ದು ಯಾಕೆ ಎಂಬ ಬಗ್ಗೆ ಹಲವು ಅನುಮಾನ ಹುಟ್ಟಿಕೊಂಡಿತ್ತು.
 
ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಗಂಗೂಲಿ ‘ನಾನು ಅಮಿತ್ ಶಾರನ್ನು ಭೇಟಿಯಾಗಿದ್ದೇ ಇದೇ ಮೊದಲು. ಆದರೆ ನಾನು ಚುನಾವಣೆಗೆ ಸಂಬಂಧಿಸಿದಂತೆ ಅಥವಾ ನನ್ನ ಆಯ್ಕೆಗೆ ಬೆಂಬಲ ಕೋರಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ನಾನು ಹಿಂದೆ ಸಿಎಂ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾದಾಗಲೂ ಇದೇ ಪ್ರಶ್ನೆ ಬಂದಿತ್ತು’ ಎಂದಿದ್ದಾರೆ. ಅಮಿತ್ ಶಾ ಕೂಡಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಬಿಸಿಸಿಐ ಅಧ್ಯಕ್ಷರ ನೇಮಿಸುವುದು ನನ್ನ ಕೆಲಸವಲ್ಲ. ಅದನ್ನೆಲ್ಲಾ ಬಿಸಿಸಿಐಯೇ ನೋಡುತ್ತದೆ ಎಂದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸೌರವ್ ಗಂಗೂಲಿ ಇರುವಾಗ ಭಯವೇತಕೆ ಎಂದ ವೀರೇಂದ್ರ ಸೆಹ್ವಾಗ್

ಮುಂಬೈ: ಟೀಂ ಇಂಡಿಯಾದಲ್ಲಿ ವೀರೇಂದ್ರ ಸೆಹ್ವಾಗ್ ಮಿಂಚುವುದಕ್ಕೆ ಪ್ರಮುಖ ಕಾರಣವೇ ಸೌರವ್ ಗಂಗೂಲಿ. ...

news

ವಿರಾಟ್ ಕೊಹ್ಲಿಯಲ್ಲಿ ಶೊಯೇಬ್ ಅಖ್ತರ್ ಕಂಡ ‘ಪಾಕಿಸ್ತಾನಿ’ ಅಂಶ ಯಾವುದು ಗೊತ್ತಾ?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟಕ್ಕೆ ಹೆಸರು. ಅವರು ಇತ್ತೀಚೆಗೆ ಟೆಸ್ಟ್ ...

news

ಮೊದಲ ಪರೀಕ್ಷೆ ಪಾಸಾದ ‘ಅಧ್ಯಕ್ಷ’ ಸೌರವ್ ಗಂಗೂಲಿ

ಮುಂಬೈ: ಬಿಸಿಸಿಐ ನೂತನ ಅಧ್ಯಕ್ಷರಾಗಿ ನಿಯೋಜನೆಗೊಳ್ಳಲಿರುವ ಮಾಜಿ ನಾಯಕ ಸೌರವ್ ಗಂಗೂಲಿ ಮೊದಲ ಹೆಜ್ಜೆ ಪಾಸ್ ...

news

ಟಿ20 ಕ್ರಿಕೆಟ್ ಆಡಲಿದ್ದಾರೆ ಸಚಿನ್ ತೆಂಡುಲ್ಕರ್

ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಆಡುವುದನ್ನು ನೋಡದೇ ತುಂಬಾ ದಿನವಾಯಿತು ಎಂದು ...