ಮುಂಬೈ: ಸಚಿನ್ ತೆಂಡುಲ್ಕರ್ ಜತೆ ಸೌರವ್ ಗಂಗೂಲಿ ಅದೆಷ್ಟೋ ದಾಖಲೆಯ ಇನಿಂಗ್ಸ್ ಆಡಿರುವುದು ಕ್ರಿಕೆಟ್ ಪ್ರಿಯರ ಮನದಲ್ಲಿ ಸದಾ ಹಸಿರಾಗಿದೆ. ಆದರೆ ಈ ಬ್ಯಾಟಿಂಗ್ ದಿಗ್ಗಜನ ರಹಸ್ಯವೊಂದನ್ನು ಗಂಗೂಲಿ ಬಿಚ್ಚಿಟ್ಟಿದ್ದಾರೆ.ಗಂಗೂಲಿ ಇತ್ತೀಚೆಗೆ ತಾವು ಬರೆದ ಎ ಸೆಂಚುರಿ ನಾಟ್ ಎನಫ್ ಎಂಬ ಆತ್ಮಕತೆಯಲ್ಲಿ ಕುತೂಹಲಕಾರಿ ವಿಷಯವನ್ನು ಹೊರ ಹಾಕಿದ್ದಾರೆ. ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ದಾಖಲಿಸಿದ್ದ ಗಂಗೂಲಿ ಆ ಪಂದ್ಯದ ನಡುವೆ ನಡೆದ ವಿಷಯವನ್ನು ಬಹಿರಂಗಪಡಿಸಿದ್ದಾರೆ.ಅದು ನನ್ನ ಮೊದಲ