ನವದೆಹಲಿ: ಕ್ರಿಕೆಟಿಗ ಧೋನಿಗಾಗಿ ತಾವು ನಾಯಕರಾಗಿದ್ದಾಗ ಸೌರವ್ ಗಂಗೂಲಿ ತಮ್ಮ ಕೆರೆಯರ್ ನ್ನೇ ತ್ಯಾಗ ಮಾಡಿದ್ದರು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿಕೊಂಡಿದ್ದಾರೆ. ಧೋನಿ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದು ಗಂಗೂಲಿ ನಾಯಕತ್ವದಲ್ಲಿ. ಗಂಗೂಲಿ ಯಾವತ್ತೂ ಯುವ ಕ್ರಿಕೆಟಿಗರಿಗೆ ಹೆಚ್ಚು ಅವಕಾಶ, ಪ್ರೋತ್ಸಾಹ ಕೊಡುತ್ತಿದ್ದರು. ಧೋನಿ ವಿಚಾರದಲ್ಲು ಹಾಗೆಯೇ ಆಯಿತು.ಧೋನಿಗಾಗಿ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನೇ ಗಂಗೂಲಿ ತ್ಯಾಗ ಮಾಡದೇ ಹೋಗಿದ್ದರೆ ಧೋನಿ ಇಂದು ಈ ಸ್ಥಾನದಲ್ಲಿರುತ್ತಿರಲಿಲ್ಲ ಎಂದು