Widgets Magazine

ಪೌರತ್ವ ವಿವಾದಕ್ಕೂ ಸೌರವ್ ಗಂಗೂಲಿ ಪುತ್ರಿ ಸನಾಗೂ ಏನು ಸಂಬಂಧ? ವೈರಲ್ ಆದ ಸಂದೇಶ

ಕೋಲ್ಕೊತ್ತಾ| Krishnaveni K| Last Modified ಗುರುವಾರ, 19 ಡಿಸೆಂಬರ್ 2019 (10:01 IST)
ಕೋಲ್ಕೊತ್ತಾ: ವಿವಾದಿತ ಪೌರತ್ವ ತಿದ್ದುಪಡಿ ಖಾಯಿದೆ ವಿಚಾರದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪುತ್ರಿ ಸನಾ ಗಂಗೂಲಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆನ್ನಲಾದ ಪೋಸ್ಟ್ ಒಂದು ವೈರಲ್ ಆಗಿದೆ.

 
ಖ್ಯಾತ ಲೇಖಕ ಖುಷ್ವಂತ್ ಸಿಂಗ್ ರ ಎಂಡ್ ಆಫ್ ಇಂಡಿಯಾ ಎಂಬ ಕಾದಂಬರಿಯ ಸಾಲುಗಳನ್ನು ಉಲ್ಲೇಖಿಸಿ ಪೌರತ್ವ ಖಾಯಿದೆ ವಿರುದ್ಧವಾಗಿ ಸನಾ ಗಂಗೂಲಿ ಬರೆದುಕೊಂಡಿದ್ದಾರೆ ಎಂದು ಇನ್ ಸ್ಟಾಗ್ರಾಂನಲ್ಲಿ ಕೆಲವರು ಪೋಸ್ಟ್ ಹರಿಯಬಿಟ್ಟಿದ್ದರು.
 
ಆದರೆ ಪುತ್ರಿಯ ಹೆಸರು ವಿವಾದಕ್ಕೀಡಾಗುತ್ತಿದ್ದಂತೆ ಸಹಾಯಕ್ಕೆ ಧಾವಿಸಿರುವ ಸೌರವ್ ಗಂಗೂಲಿ, ಈ ಪೋಸ್ಟ್ ನನ್ನ ಪುತ್ರಿಯದ್ದಲ್ಲ. ಇದು ನಕಲಿ. ವಿನಾಕಾರಣ ಅವಳನ್ನು ಈ ವಿಚಾರದಲ್ಲಿ ಎಳೆದು ತರಬೇಡಿ ಎಂದು ಮನವಿ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :