ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇಂದು ಸ್ಮರಣೀಯ ದಿನ. ಯಾಕೆಂದರೆ ಇಂದು ವಿಶ್ವ ಕ್ರಿಕೆಟ್ ಜಗತ್ತಿನ ಮುಂಚೂಣಿ ಬ್ಯಾಟ್ಸ್ ಮನ್ ಆಗಿರುವ ಕೊಹ್ಲಿ ಇದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟಿದ್ದರು.ಇದೇ ದಿನ 2008 ರಲ್ಲಿ ಶ್ರೀಲಂಕಾ ವಿರುದ್ಧ ಕೊಹ್ಲಿ ಚೊಚ್ಚಲ ಪಂದ್ಯವಾಡಿದ್ದರು. ಆ ಪಂದ್ಯದಲ್ಲಿ ಅವರು 22 ಎಸೆತ ಎದುರಿಸಿ 12 ರನ್ ಗಳಿಸಿದ್ದರು.ಅಂದಿನಿಂದ ಶುರುವಾದ ಅವರ ಕ್ರಿಕೆಟ್ ಜರ್ನಿ ಇಂದು 12 ವರ್ಷ ಕಳೆದಿದೆ.