ಮುಂಬೈ: ಭಾರತ ಕ್ರಿಕೆಟ್ ತಂಡದ ಪರ ಆಡಲು ಅವಕಾಶ ಕೊಡದಿದ್ದರೆ ವಿದೇಶಿ ತಂಡದ ಪರವಾದರೂ ಆಡುತ್ತೇನೆ. ಕ್ರಿಕೆಟ್ ಗಾಗಿ ದೇಶ ಬಿಡುತ್ತೇನೆ ಎಂದಿದ್ದ ವೇಗಿ ಶ್ರೀಶಾಂತ್ ಕನಸಿಗೆ ಬಿಸಿಸಿಐ ತಣ್ಣೀರೆರಚಿದೆ. ದೇಶದ ಪರ ಆಡುವುದು ನನ್ನ ಬಯಕೆ. ಆದರೆ ಬಿಸಿಸಿಐ ನನ್ನ ಮೇಲಿನ ನಿಷೇಧ ತೆರವುಗೊಳಿಸುತ್ತಿಲ್ಲ. ಹೀಗೇ ಆದರೆ ವಿದೇಶೀ ತಂಡದ ಪರವಾದರೂ ಆಡುತ್ತೇನೆ ಎಂದು ಮ್ಯಾಚ್ ಫಿಕ್ಸಿಂಗ್ ಕಳಂಕಕ್ಕೆ ತುತ್ತಾಗಿದ್ದ ಶ್ರೀಶಾಂತ್ ಹೇಳಿದ್ದರು.ಅವರ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ