Widgets Magazine

ಮ್ಯಾಚ್ ಫಿಕ್ಸಿಂಗ್ ನಲ್ಲಿ ಟೀಂ ಇಂಡಿಯಾ ಆಟಗಾರ? ಶ್ರೀಶಾಂತ್ ಬಾಯ್ಬಿಟ್ಟ ಸ್ಪೋಟಕ ರಹಸ್ಯ!

ಕೊಚ್ಚಿ| Krishnaveni| Last Modified ಶುಕ್ರವಾರ, 3 ನವೆಂಬರ್ 2017 (09:27 IST)
ಕೊಚ್ಚಿ: ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಕಳಂಕದಿಂದಾಗಿ ಟೀಂ ಇಂಡಿಯಾಕ್ಕೆ ಮರಳಿ ಬರಲು ಸಾಧ್ಯವಾಗದೇ ಹತಾಶೆಯಲ್ಲಿರುವ ವೇಗಿ ಶ್ರೀಶಾಂತ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.
 
ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದು ಶ್ರೀಶಾಂತ್ ನಿರ್ದೋಷಿ ಎಂದು ಸಾಬೀತಾದರೂ ಮರಳಿ ಕ್ರಿಕೆಟ್ ಆಡಲು ಒಪ್ಪಿಗೆ ಸಿಗುತ್ತಿಲ್ಲ. ಇದರಿಂದ ಕ್ರುದ್ಧರಾಗಿರುವ ಶ್ರೀಶಾಂತ್ ಟೀಂ ಇಂಡಿಯಾದಲ್ಲಿ ಸದ್ಯ ಆಡುತ್ತಿರುವ ಆಟಗಾರರೊಬ್ಬರೂ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದಾರೆ.
 
ಚೆನ್ನೈ ಮತ್ತು ರಾಜಸ್ಥಾನ ತಂಡವೂ ಮ್ಯಾಚ್ ಫಿಕ್ಸಿಂಗ್ ಕಳಂಕಕ್ಕೆ ತುತ್ತಾಗಿತ್ತು. ಹಾಗಿದ್ದರೂ ಆ ತಂಡದ ಆಟಗಾರರನ್ನೆಲ್ಲಾ ವಿಚಾರಣೆಗೊಳಪಡಿಸಲಿಲ್ಲವೇಕೆ? ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಕೆಲವೊಂದು ಹೆಸರನ್ನು ಕೈ ಬಿಟ್ಟಿದ್ದೇಕೆ ಎಂದು ಶ್ರೀಶಾಂತ್ ಪ್ರಶ್ನಿಸಿದ್ದಾರೆ.
 
ಪೊಲೀಸರ ಪಟ್ಟಿಯಲ್ಲಿ ಮೊದಲಿದ್ದ ಕೆಲವು ಆಟಗಾರರ ಪೈಕಿ ಕೆಲವರು ಈಗಲೂ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಕ್ರಿಯರಾಗಿದ್ದಾರೆ. ಇವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಶ್ರೀಶಾಂತ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿಡಿ ಕಾರಿದ್ದಾರೆ. ಶ್ರೀಶಾಂತ್ ಈ ಹೇಳಿಕೆಗಳು ಹೊಸ ಸಂಚಲನ ಸೃಷ್ಟಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :