ಕೊಲೊಂಬೊ: ಶ್ರೀಲಂಕಾದ 2011 ರ ವಿಶ್ವಕಪ್ ತಂಡದ ಭಾಗವಾಗಿದ್ದ ಸೂರಜ್ ರಣದೀವ್ ಬಗ್ಗೆ ಕ್ರಿಕೆಟ್ ಪ್ರಿಯರಿಗೆ ಗೊತ್ತಿರುತ್ತದೆ. ಆ ಕ್ರಿಕೆಟಿಗ ಈಗ ತಮ್ಮ ಹೊಟ್ಟೆಪಾಡಿಗಾಗಿ ಆಸ್ಟ್ರೇಲಿಯಾದಲ್ಲಿ ಬಸ್ ಚಾಲಕನ ಕೆಲಸ ಮಾಡುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.ಲಂಕಾ ಪರ 12 ಟೆಸ್ಟ್, 31 ಏಕದಿನ, ಮತ್ತು 7 ಟಿ20 ಪಂದ್ಯಗಳನ್ನಾಡಿದ್ದ ಮಾಜಿ ಕ್ರಿಕೆಟಿಗ ರಣದೀವ್ ತಮ್ಮ ಹೊಟ್ಟೆಪಾಡಿಗಾಗಿ ಈಗ ಆಸ್ಟ್ರೇಲಿಯಾದ ಟ್ರಾವೆಲ್ಸ್ ಕಂಪನಿಯೊಂದರಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಈ ಟ್ರಾವೆಲ್ಸ್